ಯಕ್ಷ ಚರಿತ್ರೆ-7

“ಯಕ್ಷ ರಂಗದ ಮೋಹಕ ತಾರೆ” ಶ್ರೀ ಸುಧೀರ್ ಉಪ್ಪೂರುರ ಚರಿತ್ರೆ”

ಸುಧೀರ್ ಉಪ್ಪೂರು ಯಕ್ಷಗಾನ ಕಲಾವಿದ ಚಿತ್ರ
Sudheer Uppoor in Yakshagana Sthreevesha role"

yakshagana images
yaksha charithre
ಸುಧೀರ್ ಉಪ್ಪೂರು

ಉಡುಪಿ ಜಿಲ್ಲೆಯ ಉಪ್ಪೂರು ಗ್ರಾಮದ ಶ್ರೀಮತಿ ಶೋಭಾ ಹಾಗೂ ಶ್ರೀ ಸುಬ್ಬರಾಯ ಅವರ ಪುತ್ರರಾಗಿ 19-ಏಪ್ರಿಲ್-1994ರಂದು ಜನಿಸಿದ ಸುಧೀರ್ ಉಪ್ಪೂರು, ವಾಣಿಜ್ಯ ವಿಭಾಗದಲ್ಲಿ ಪದವೀಧರರು. ಯಕ್ಷಗಾನಕ್ಕೆ ಇವರ ಮೊದಲ ಹೆಜ್ಜೆ ಯಕ್ಷಗಾನ ಕ್ಯಾಸೆಟ್‌ಗಳ ಮೂಲಕವೇ. ಪ್ರಸಿದ್ಧ ಸ್ತ್ರೀವೇಷ ಕಲಾವಿದರಾದ ಶ್ರೀ ಆನಂದ್ ಉಪ್ಪಿನಕುದ್ರು (ಇವರ ಮಾವ) ಅವರ ಅಭಿನಯ ನೋಡಿ ಇವರಲ್ಲಿಯೂ ಯಕ್ಷಗಾನದ ಮೇಲಿನ ಪ್ರೀತಿ ಮೂಡಿತು. ವಿಶೇಷವಾಗಿ ಅವರ ತೀವ್ರ ನಾಟಕೀಯತೆಯೊಂದಿಗೆ ಮಿಂಚುವ ಸ್ತ್ರೀವೇಷಗಳು ಇವರು ಯಕ್ಷಗಾನದಲ್ಲಿ ಅದೇ ಶೈಲಿಯನ್ನು ತಾವು ಸಹ ಅಳವಡಿಸಿಕೊಳ್ಳಬೇಕು ಎಂಬ ಉತ್ಸಾಹಕ್ಕೆ ಕಾರಣವಾಯಿತು. ಇದೇ ಉತ್ಸಾಹ ಮತ್ತು ಪ್ರೇರಣೆಯು ಸುಧೀರ್ ಉಪ್ಪೂರು ಅವರನ್ನು ಯಕ್ಷಗಾನ ರಂಗದಲ್ಲಿ ತಮ್ಮದೇ ಆದ ಗುರುತನ್ನು ಪಡೆಯಲು ದಾರಿ ಆಗಿದೆ.

ಸುಧೀರ್ ಉಪ್ಪೂರು ಅವರು ತಮ್ಮ ಯಕ್ಷಗಾನ ಪ್ರವೇಶವನ್ನು ‘ವಿನಾಯಕ ಯಕ್ಷಗಾನ ಸಂಘ’, ಕೆ.ಜಿ.ರೋಡ್ ಉಪ್ಪೂರು ಹಾಗೂ ‘ನಾಗಲಿಂಗೇಶ್ವರ ಯಕ್ಷಗಾನ ಸಂಘ’, ಅಗ್ರಹಾರ ಹೇರೂರು ಎಂಬ ಹವ್ಯಾಸಿ ಸಂಘಗಳಲ್ಲಿ ವೇಷಧಾರಿಯಾಗಿ ಆರಂಭಿಸಿದರು. ದಿವಂಗತ ರಾಘವೇಂದ್ರ ನಾಯಕ್ ಕರಂಬಳ್ಳಿ ಅವರು ಇವರಿಗೆ ಯಕ್ಷಗಾನದ ನಾಟ್ಯ ಗುರುಗಳು. ವಿವಿಧ ಪ್ರಸಂಗಗಳಲ್ಲಿ ಬಡಗುತಿಟ್ಟಿನ ವೇಷಗಳನ್ನು ಮಾಡಿ, ರಂಗನಡಿಗೆ, ಪಾದಚಾಲನೆ, ನೃತ್ಯಾಭಿನಯಗಳನ್ನು ನಾಗಲಿಂಗೇಶ್ವರ ಸಂಘದ ಮಾರ್ಗದರ್ಶನದಲ್ಲಿ ಕಲಿತರು.
“ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ನೀಲ್ಕೋಡು ಶಂಕರ ಹೆಗಡೆಯವರ ವೇಷಗಳನ್ನು ಕ್ಯಾಸೆಟ್‌ಗಳಲ್ಲಿ ನೋಡಿ ಅವರಂತೆಯೇ ಮನೆಯಲ್ಲಿ ಕುಣಿಯುತ್ತಿದ್ದೆ. ಅವರ ಅಭಿನಯ ನನ್ನಲ್ಲಿ ದೊಡ್ಡ ಪ್ರಭಾವ ಬೀರಿತು” ಸುಧೀರ್ ಉಪ್ಪೂರು ಎಂದು ಹೇಳುತ್ತಾರೆ.

“ಪೌರಾಣಿಕ ಹಾಗೂ ಸಾಮಾಜಿಕ ಪ್ರಸಂಗಗಳಲ್ಲಿ ವಿವಿಧ ವೇಷಧಾರಣೆಯನ್ನು ಮಾಡುವುದು ನನ್ನ ಅತ್ಯಂತ ಆಸಕ್ತಿಯ ವಿಷಯ” ಎಂದು ಸುಧೀರ್ ಉಪ್ಪೂರು ಅವರು ಮನದಾಳದಿಂದ ಹೇಳುತ್ತಾರೆ. ಹಟ್ಟಿಯಂಗಡಿ ಮೇಳದಲ್ಲಿ ತಾವು ವೇಷಧಾರಿಯಾಗಿದ್ದ ಸಂದರ್ಭದಲ್ಲಿನ ‘ಮಂತ್ರ ಮಯೂರಿ’ ಎಂಬ ಪ್ರಸಂಗದಲ್ಲಿ ಮಯೂರಿ ಎಂಬ ಪಾತ್ರ ನಿರ್ವಹಣೆ ಇವರಿಗೆ ವಿಶೇಷ ಖ್ಯಾತಿಯನ್ನು ತಂದಿತ್ತು ಎಂಬುದು ಅವರ ನೆನಪಿನ ಸವಿನೆನಪು.”

ಉಪ್ಪೂರರ ಕೆಲವೊಂದು ಪಾತ್ರಗಳು ಮನಮೋಹಕ, ಪ್ರೇಕ್ಷಕರಿಗೆ ರೋಮಾಂಚನಗೊಳಿಸುವಂತಹ ಪಾತ್ರ ನಿರ್ವಹಣೆ. ಅದರಲ್ಲಿ ಪ್ರಮುಖ ಪಾತ್ರಗಳು

ಸುಧೀರ್ ಉಪ್ಪೂರು ಯಕ್ಷಗಾನ ಕಲಾವಿದ ಚಿತ್ರ
Sudheer Uppoor in Yakshagana Sthreevesha role"

yakshagana images
yaksha charithre

ನಾಗವಲ್ಲಿ

“ಸತ್ಯಭಾಮೆ”

ಸುಧೀರ್ ಉಪ್ಪೂರು ಯಕ್ಷಗಾನ ಕಲಾವಿದ ಚಿತ್ರ
Sudheer Uppoor in Yakshagana Sthreevesha role"

yakshagana images
yaksha charithre

ಮೋಹಿನಿ, ವಿಷಯೇ, ಅಸಿಕೆ, ದ್ರೌಪದಿ, ಮೇನಕಾ, ರುಚಿಮತಿ, ಅಂಬೆ, ಚಂದ್ರಾವಳಿ, ತಿಲೋತ್ತಮೆ ಮುಂತಾದ ಪ್ರಾತ್ರಗಳು ಉಪ್ಪೂರರಿಗೆ ಖ್ಯಾತಿಯನ್ನು ತಂದುಕೊಟ್ಟಿದೆ.

ಪ್ರತಿಯೊಂದು ವೇಷ ನಿರ್ವಹಣೆಯಿಗೂ ಮುನ್ನ, ಪಾತ್ರದ ಆಳವನ್ನೂ, ಸುತ್ತಲಿನ ಹಿನ್ನೆಲೆಯನ್ನೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಹಿರಿಯ ಕಲಾವಿದರ ಬಳಿ ಸೇರಿ ವಿವರ ಕೇಳಿಕೊಳ್ಳುತ್ತೇನೆ. ಅವರ ಸಲಹೆಗಳ ಆಧಾರದ ಮೇಲೆ ಪಾತ್ರಕ್ಕೆ ಬೇಕಾದ ವಿಷಯವನ್ನು ಬರೆದು, ಅದನ್ನು ಆಳವಾಗಿ ಅಭ್ಯಾಸ ಮಾಡುವ ಅಭ್ಯಾಸ ನನಗೆ ರೂಢಿಯಾಗಿದೆ,” ಎಂದು ಸುಧೀರ್ ಉಪ್ಪೂರು ಅವರು ಮನದಾಳದಿಂದ ಹೇಳಿದ್ದಾರೆ.
“ಎಂ.ಕೆ. ರಮೇಶ್ ಆಚಾರ್ಯ, ಕೊಂಡದಕುಳಿ ರಾಮಚಂದ್ರ ಹೆಗಡೆ, ಜಯನಂದ್ ಹೊಳೆಕೊಪ್ಪ, ಸುರೇಶ್ ಶೆಟ್ಟಿ ಶಂಕರನಾರಾಯಣ ಮೊದಲಾದ ಹಿರಿಯ ಕಲಾವಿದರು, ಪಾತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುತ್ತಾ ನನ್ನ ಕಲಾ ಪಯಣಕ್ಕೆ ದಿಕ್ಕು ತೋರಿದ್ದಾರೆ ಎಂಬುದು ಅವರ ನಮನಪೂರ್ಣ ವಚನ.

ಸುಧೀರ್ ಉಪ್ಪೂರು ಯಕ್ಷಗಾನ ಕಲಾವಿದ ಚಿತ್ರ
Sudheer Uppoor in Yakshagana Sthreevesha role"

yakshagana images
yaksha charithre

ಡಿಗ್ರಿ ಪೂರ್ಣಗೊಳಿಸಿದ ಬಳಿಕ, ಧಾರೇಶ್ವರ ಭಾಗವತರು ನಿರ್ದೇಶಿಸುತ್ತಿದ್ದ ನೀಲಾವರ ಮೇಳದಲ್ಲಿ ಅವರು ಕಲಾಪಯಣ ಆರಂಭಿಸಿದರು. ಇದನ್ನು ತಮ್ಮ ಯಕ್ಷಗಾನ ಜೀವನದ ಭದ್ರ ಪಂಚಾಂಗವೆಂದೇ ಗುರುತಿಸುತ್ತಾರೆ ಉಪ್ಪೂರು.
‘ಧಾರೇಶ್ವರ ಭಾಗವತರ ರಂಗ ನಡೆಯ ಶಿಸ್ತಿಗೆ ಮನಸ್ಸು ಮಾರುಹೋಯಿತು. ಪಾತ್ರದ ಸೂಕ್ಷ್ಮತೆ, ಪಾತ್ರಕ್ಕೆ ಸೂಕ್ತವಾದ ನಾಟ್ಯದ ಪ್ರಮಾಣ, ಪ್ರತಿಪಾತ್ರದ ಸಂಭಾಷಣೆಯ ಶೈಲಿ ಈ ಎಲ್ಲವನ್ನು ನನಗೆ ಅವರು ಸಹನೆ, ಪ್ರೀತಿಯಿಂದ ತಿಳಿಸಿ ಕಲಿಸಿದವರು’ ಎಂದು ಕೃತಜ್ಞತೆಯುಳ್ಳ ಧ್ವನಿಯಲ್ಲಿ ಉಪ್ಪೂರು ಅವರು ನುಡಿದರು.

ನೀಲಾವರ ಮೇಳದಲ್ಲಿ ತಿರುಗಾಟದ ಅನುಭವದ ಬಳಿಕ, ಶ್ರೀಯುತ ರಂಜಿತ್ ಶೆಟ್ಟಿಯವರ ಯಜಮಾನಿಕೆಯ ಹಟ್ಟಿಯಂಗಡಿ ಮೇಳದಲ್ಲಿ, ಹಿರಿಯ ಕಲಾವಿದರಾದ ಹಳ್ಳಾಡಿ ಜಯರಾಮ ಶೆಟ್ಟಿಯವರ ಜೊತೆ ಹಾಗೂ ಬೇಳೂರು ವಿಷ್ಣುಮೂರ್ತಿ ನಾಯಕ್ ಅವರ ನಿರ್ದೇಶನದಲ್ಲಿ ಹೊಸ ಪ್ರಸಂಗಗಳಲ್ಲಾಗಿ ನಾಲ್ಕು ವರ್ಷಗಳ ಕಾಲ ತಿರುಗಾಟ ನಡೆಸಿದರು. ಪ್ರಸ್ತುತ ಅವರು ಪೆರ್ಡೂರು ಮೇಳದಲ್ಲಿ ತಮ್ಮ ಯಕ್ಷಪಯಣ ಮುಂದುವರೆಸುತ್ತಿದ್ದಾರೆ.
ಅಲ್ಲಿ ಹಿರಿಯ ಕಲಾವಿದರಾದ ವಿದ್ಯಾಧರ ಜಲವಳ್ಳಿ ಮತ್ತು ಮೇಳದ ಪ್ರಧಾನ ಸ್ತ್ರೀ ವೇಷಧಾರಿ ಶ್ರೀ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆಯವರಿಂದ ಹಲವಾರು ಪ್ರಮುಖ ಕಲಾ ವಿವರಣೆಗಳನ್ನು ಪಡೆದು, ತಮ್ಮ ಕಲೆಯಲ್ಲಿ ಮತ್ತಷ್ಟು ನುಡಿಸಾಣಿಕೆ ಗಳಿಸುತ್ತಿದ್ದಾರೆ ಎಂಬುದನ್ನು ಉಪ್ಪೂರು ಅವರು ಹರ್ಷದಿಂದ ಹೇಳಿಕೊಂಡಿದ್ದಾರೆ.

ನಾನು ಕಲಾವಿದನಾಗಿ ಬೆಳೆಯುವ ಮಾರ್ಗದಲ್ಲಿ ನನ್ನನ್ನು ಪ್ರೇರೇಪಿಸಿ, ಪ್ರೋತ್ಸಾಹಿಸಿ ಬೆಳೆಸಿದ ಎಲ್ಲಾ ಗುರು ಹಿರಿಯರಿಗೆ, ಅನುಭವಿಗಳಾದ ಕಲಾವಿದರಿಗೆ, ನನ್ನ ಸಾಥಿ ಮಿತ್ರರಿಗೆ ಮತ್ತು ನನ್ನೊಂದಿಗೆ ನಿಲ್ಲುತ್ತಿದ್ದ ಕುಟುಂಬದ ಪ್ರತಿಯೊಬ್ಬರೂ ಅವರಿಗೆ ನನ್ನ ಹೃತ್ಪೂರ್ವಕ ಅನಂತ ಧನ್ಯವಾದಗಳು ಎಂದು ಉಪ್ಪೂರು ಅವರು ಕೃತಜ್ಞತೆಯಿಂದ ಹೇಳಿದ್ದಾರೆ.

ಇವರು ನಂಬಿರುವ ಕಲಾಮಾತೆ ಹಾಗೂ ಮಂದಾರ್ತಿ ದುರ್ಗಾಪರಮೇಶ್ವರಿ ಅಮ್ಮನವರು, ಇವರಿಗೆ ಕಲಾಕ್ಷೇತ್ರದಲ್ಲಿ ಇನ್ನಷ್ಟು ಶಕ್ತಿ, ಸದ್ಬುದ್ಧಿ ಹಾಗೂ ಸೃಜನಶೀಲತೆ ಕರುಣಿಸಲಿ ಎಂದು ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತೇವೆ. ಅವರ ಕಲಾಯಾತ್ರೆ ಬೆಳಗಲಿ, ಯಶಸ್ವಿಯಾಗಲಿ ಎಂಬುದು ಎಲ್ಲ ಕಲಾಸಕ್ತರ ಹಾರೈಕೆ. ಕಲಾಮಾತೆ ಅವರ ಬದುಕಿಗೆ ಸಕಲ ಮಂಗಳಗಳು, ಆಯುರಾರೋಗ್ಯ, ಶ್ರೀ, ಧೃತಿ, ಕೀರ್ತಿ ಹಾಗೂ ಕಲಾ ಪುಣ್ಯವನ್ನು ಪರಿಪೂರ್ಣವಾಗಿ ನೀಡಲಿ ಎಂಬುದೇ ನಮ್ಮ ಸದಾಶಯ.

ನಮ್ಮ ಸೋಶಿಯಲ್ ಮೀಡಿಯಾ ಚಾನಲನ್ನು ಸೇರಲು ಇಲ್ಲಿ ಕ್ಲಿಕ್ ಮಾಡಿ:

Leave a Reply

Your email address will not be published. Required fields are marked *